ಯಕ್ಷಪ್ರಶ್ನೆ ಸಂಪುಟ ೧ ಸಂಚಿಕೆ ೧೧

6 | Total Attempts: 290

SettingsSettingsSettings
Please wait...

ಯಕ್ಷಪ್ರಶ್ನೆ ಸಂಪುಟ ೧ ಸಂಚಿಕೆ ೧೧ ...ಸ್ವಾಗತ, ಸುಸ್ವಾಗತ, ಶುಭಸ್ವಾಗತ.ತಮ್ಮ ಹೆಸರು ಅಥವಾ ಮಿಂಚಂಚೆ ವಿಳಾಸವನ್ನು ಸರಿಯಾಗಿ ಬರೆದು ನಂತರ ಉತ್ತರಿಸಲು ಶುರುಮಾಡಿ. ಮುಂದೆ ಬಹುಮಾನ ಸಂಪಾದಿಸಲು ಅನುಕೂಲವಾಗಬಹುದು.!


Questions and Answers
 • 1. 
  ‘ಅನುವು ಅನ್ನದಿರು ಆಪತ್ತು ಅನ್ನದಿರು’ ಎಂಬ ನುಡಿಗಟ್ಟಿನ ಅರ್ಥವೇನು?
  • A. 

   ಬೇಜವಾಬ್ದಾರಿಯಿಂದಿರು

  • B. 

   ತಟಸ್ಥವಾಗಿದ್ದುಬಿಡು

  • C. 

   ಸಂದೇಹಿಸು

  • D. 

   ತೀರಾ ಶಾಂತ ಸ್ವಭಾವದವನು

 • 2. 
  ಈ ಕನ್ನಡ ಒಗಟನ್ನು ಬಿಡಿಸಿ.  ಕಣ್ಣಾಮುಚ್ಚೇ ಕಾಡೇಗೂಡೆ, ಉದ್ದಿನ ಮೂಟೆ ಉರುಳೇಹೋಯ್ತು,  ನಮ್ಮಯ ಹಕ್ಕಿ ಬಿಟ್ಟೇ ಬಿಟ್ಟೇ, ನಿಮ್ಮಯ ಹಕ್ಕಿ ಮುಚ್ಚಿಟ್ಕೊಳ್ಳಿ!
  • A. 

   ಮಕ್ಕಳ ಆಟ

  • B. 

   ರಾಮಾಯಣ

  • C. 

   ಹುಟ್ಟು-ಸಾವು

  • D. 

   ಕಾಗೆ-ಕೋಗಿಲೆ

 • 3. 
  ನಂ ಸಪನಾತಿ ಸುಬ್ಬೀನ ಲೆಕ್ಕದ್ ಮೇಷ್ಟ್ರು ಬಂದು ಕೇಳಿದ್ರು. ‘ಒಂದು ಮರದ್ ಮ್ಯಾಗೆ ಒಮ್ದು ಗಿಳಿ ಕೂತಿತ್ತು. ಅಲ್ಲಿಗೆ ಗಿಳಿಗಳ ಒಂದ್ ಗುಂಪ್ ಹಾರಿ ಬಂತು. ಮರದ್ ಮ್ಯಾಗೆ ಕುಂತಿದ್ ಗಿಳಿ, ಹೊಸದಾಗೆ ಬಂದಿರೋ ಗಿಳಿಗಳನ್ ಕೇಳ್ತು. ‘ನೀವೇಟ್ ಮಂದಿ ಬಂದಿದ್ದೀರಿ?’ ಆಗ ಒಸದಾಗಿ ಬಂದಿದ್ದ ಗಿಳಿಗಳ ನಾಯಕ ಯೋಳ್ತು. "ನಾವು, ನಮ್ಮಷ್ಟು, ನಮ್ಮರ್ಧ, ನಮ್ಕಾಲು, ನೀನು ಸೇರಿದ್ರೆ ನೂರು". ಈ ನೂರು ಎಂಗಾತು ಅಂತ ನೀ ಏಳು ನೋಡಾನ ಮತ್ತೆ ಅಂದ್ರು ಲೆಕ್ಕದ್ ಮೇಷ್ಟ್ರು. ಸುಪನಾತಿ ಸುಬ್ಬಿ ಏನಂತ ಉತ್ರ ಕೊಟ್ಟಿರ್ಬೌದು?
  • A. 

   ೩೪+೩೪+೧೭+೧೪+೧=೧೦೦

  • B. 

   ೩೮+೩೮+೧೬+೭+೧=೧೦೦

  • C. 

   ೩೬+೩೬+೧೮+೯+೧=೧೦೦

  • D. 

   ೩೨+೩೨+೧೯+೧೬+೧=೧೦೦

 • 4. 
  ಕರ್ನಾಟಕಕ್ಕೆ ಸಂಬಂಧಪಟ್ಟ ಹಾಗೆ, ಅರಾಬಿತಿಟ್ಟು, ಮೂಕಾಂಬಿಕಾ, ಶೆಟ್ಟಿಹಳ್ಳಿ, ಸೋಮೇಶ್ವರಗಳಲ್ಲಿ ಇರುವ ಸಮಾನ ಅಂಶವು ಯಾವುದು?
  • A. 

   ಪಕ್ಷಿಧಾಮಗಳು

  • B. 

   ಮಲೆನಾಡಿನ ನದಿಗಳು ಹುಟ್ಟುವ ಸ್ಥಳಗಳು

  • C. 

   ಕಬ್ಬಿಣ ಅದಿರಿರುವ ಪ್ರದೇಶಗಳು

  • D. 

   ಅಭಯಾರಣ್ಯಗಳು

 • 5. 
  ಕೋಲಾರದಲ್ಲಿರುವ ಈ ಚಾರಿತ್ರಿಕ ಸ್ಥಳವನ್ನು ಗುರುತಿಸಿ.ಸುಳುಹು-೧: ಇದು ಮಾರ್ಕಂಡೇಯ ನದಿಯ ಎರಡು ಕವಲುಗಳ ನಡುವೆ ಇದೆ.ಸುಳುಹು-೨: ಇಲ್ಲಿ ಹೈದರಾಲಿಯ ತಂದೆ ಫತೇ ಮೊಹಮ್ಮದ್ ಜೀವಿಸಿದ್ದನು. ಇಲ್ಲಿ ಹೈದರಾಲಿ ಕೋಟೆಯನ್ನು ಕಟ್ಟಿದನು.ಸುಳುಹು-೩: ಬಂಗಾರು ಪೇತೆ ತಾಲೂಕಿನಲ್ಲಿರುವ ಈ ಸ್ಥಳವನ್ನು ವಿಭೂತಿಪುರವೆಂದೂ ಕರೆಯುವರು.
  • A. 

   ಮಾಲೂರು

  • B. 

   ಉಣಕಲ್

  • C. 

   ಅಂತರಗಂಗೆ

  • D. 

   ಬೂದಿಕೋಟೆ

 • 6. 
  <font size ="4">ಕನ್ನಡಕ್ಕಾಗಿ ದುಡಿದ ಈ ಮಹನೀಯರನ್ನು ಗುರುತಿಸಿ.</font>
  • A. 

   ಅಕಬರ ಅಲಿ

  • B. 

   ರಂಗನಾಥ ದಿವಾಕರ್

  • C. 

   ಎ.ಎನ್.ಮೂರ್ತಿರಾವ್

  • D. 

   ಎಂ.ಆರ್.ಶ್ರೀನಿವಾಸಮೂರ್ತಿ

Back to Top Back to top