ಯಕ್ಷಪ್ರಶ್ನೆ ಸಂಪುಟ ೧ ಸಂಚಿಕೆ ೯

6 | Total Attempts: 211

SettingsSettingsSettings
Please wait...

 ಯಕ್ಷಪ್ರಶ್ನೆ ಸಂಪುಟ ೧ ಸಂಚಿಕೆ ೯ ...ಸ್ವಾಗತ, ಸುಸ್ವಾಗತ, ಶುಭಸ್ವಾಗತ.ತಮ್ಮ ಹೆಸರು ಅಥವಾ ಮಿಂಚಂಚೆ ವಿಳಾಸವನ್ನು ಸರಿಯಾಗಿ ಬರೆದು ನಂತರ ಉತ್ತರಿಸಲು ಶುರುಮಾಡಿ. ಮುಂದೆ ಬಹುಮಾನ ಸಂಪಾದಿಸಲು ಅನುಕೂಲವಾಗಬಹುದು.!


Questions and Answers
 • 1. 
  ‘ಅನಾದ್ರಿಯಾಗು’ ನುಡಿಗಟ್ಟಿನ ಅರ್ಥವೇನು?
  • A. 

   ಅನ್ಯಾಯವನ್ನು ಮಾಡು

  • B. 

   ಅನಾಥವಾಗು

  • C. 

   ಹಾಳಾಗಿ ಹೋಗು

  • D. 

   ಧೈರ್ಯವನ್ನು ತಂದುಕೊ

 • 2. 
  ಈ ಕನ್ನಡ ಒಗಟನ್ನು ಬಿಡಿಸಿ : ಸುತ್ತುವುದು ಸುತ್ತುವುದು ಓಲೆ ತಾನಲ್ಲ ವಿಸ್ತರಿಸಿ ಬರೆವುದಕೆ ಕಂಠ ಮೊದಲಿಲ್ಲ| ಪೆಟ್ಟಿಗೆಯ ತುಂಬುವರೆ ಆಭರಣವಿಲ್ಲ ಇದು ಹೇಳಬಲ್ಲ ಜಾಣರಿಗೆ ಅರಿದಲ್ಲ||
  • A. 

   ಹಾವು

  • B. 

   ಚಕ್ಕುಲಿ

  • C. 

   ಶ್ಯಾವಿಗೆ

  • D. 

   ಸರಪಳಿ

 • 3. 
  ಬರುಮಣ್ಣನ್ ತಾವ್ ಅತ್ತೋಂಬತ್ ಹಸುಗಳಿದ್ದೊ. ಅವನ್ ಸಾಯೋ ಟೇಮ್ ಬಂತು. ಮೂರು ಮಕ್ಳನ್ ಕರ್ದ. ರಾಮಣ್ಣ ನೀನ್ ಅರ್ಧ ಹಸುಗಳನ್ನ ತಗಾ! ಭೀಮಣ್ಣ ನೀನ್ ಒಟ್ಟು ಹಸುಗಳಲ್ಲಿ ಕಾಲು ಭಾಗ ತಗಾ, ಸೋಮಣ್ಣ ನೀನು ಒಟ್ಟು ಹಸುಗಳಲ್ಲಿ ೧/೫ ಭಾಗ ತಗಾ ಅಂದ. ಸತ್ತೋದ. ಈಗ ಮೂರೂ ಮಕ್ಕ್ಳಿಗೆ ಅಪ್ಪ ಏಳ್ದಂಗೆ ಅಸುಗಳನ್ನು ಅಂಚಿಕೊಳ್ಳದು ಎಂಗೆ ಅಂತ ತಿಳೀನಿಲ್ಲ. ಅವರು ನೆಟ್ಟಗೆ ಅಸುಗಳನ್ನೆಲ್ಲ ಒಡ್ಕಂಡು ಸುಪನಾತಿ ಸುಬ್ಬಿ ಹತ್ರಕ್ಕ್ ಬಂದ್ರು. ಸುಬ್ಬಿ ಅವರಿಗೆಲ್ಲ ಅಸುಗಳ್ನ್ ಅವ್ರಪ್ಪ ಬರಮಣ್ಣ ಏಳ್ದಂಗೆ ಅಂಚಿದ್ಲು. ಯಂಗ್ ಅಂಚಿದ್ಲು ಅಂತ ಸ್ವಲ್ಪ ಏಳಿ ನೋಡಾನ ಮತ್ತೆ?
  • A. 

   ೮+೬+೫

  • B. 

   ೯+೬+೪

  • C. 

   ೮+೭+೪

  • D. 

   ೧೦+೫+೪

 • 4. 
  ಭಾರತದಲ್ಲಿ ಅತ್ಯಧಿಕ ಮಳೆ ಬೀಳುವ ಹದಿನಾಲ್ಕು ಸ್ಥಳಗಳಲ್ಲಿ, ನಾಲ್ಕು ಸ್ಥಳಗಳು ಕರ್ನಾಟದಲ್ಲಿವೆ. ಅವು ಯಾವವು?
  • A. 

   ಆಗುಂಬೆ, ಸಾಗರ, ಬೆಳಗಾವಿ, ಬೆಂಗಳೂರು

  • B. 

   ಆಗುಂಬೆ, ಸೊರಬ, ಭಾಗಮಂಡಲ, ಪುಲ್ಲಿಂಗೋತ್

  • C. 

   ಆಗುಂಬೆ, ಭಾಗಮಂಡಲ, ಪುಲ್ಲಿಂಗೋತ್, ಮಾಕುಟ್

  • D. 

   ಆಗುಂಬೆ, ಶಿರಾಡಿ, ಪುಲ್ಲಿಂಗೋತ್, ಮಾಕುಟ್

 • 5. 
  ಮಂಡ್ಯ ಜಿಲ್ಲೆಯ ಈ ಧಾರ್ಮಿಕ ಕ್ಷೇತ್ರವನ್ನು ಗುರುತಿಸಿ.: ಸುಳುಹು-೧: ಕೃಷ್ಣರಾಜಪೇಟೆ ಹಾಗೂ ಪಾಂಡವಪುರಗಳ ಮಧ್ಯದಲ್ಲಿದೆ. ಮುಖ್ಯದಾರಿಯಿಂದ ೩ ಕಿ.ಮೀ. ಒಳದಾರಿಯಲ್ಲಿದೆ. ಸುಳುಹು-೨: ವರಾಹಮೂರ್ತಿಯ ಶಿಲ್ಪ ಅತ್ಯಂತ ಸುಂದರವಾಗಿದೆ. ಕೋರೆಹಲ್ಲು ಹೊರಚಾಚಿದ ವರಾಹ, ನಿಮಿರಿ ನಿಂತ ಕಿವಿಗಳು, ಉದ್ದನೆಯ ಮುಖ ಹಾಗೂ ನಾಲ್ಕು ಕೈಗಳಿರುವ ಈ ಮೂರ್ತಿ ಭಕ್ತಿಯ ಜೊತೆಯಲ್ಲಿ ಭಯವನ್ನೂ ಹುಟ್ಟಿಸುತ್ತದೆ. ಸುಳುಹು-೩: ೫ ಅಡಿ ಪೀಠದ ಮೇಲೆ, ೧೪ ಅಡಿ ಎತ್ತರದ ಭವ್ಯ ವಿಗ್ರಹವಿದು.
  • A. 

   ಕಲ್ಲಹಳ್ಳಿ

  • B. 

   ಕಿಕ್ಕೇರಿ

  • C. 

   ಕಡಿಯಾಳಿ

  • D. 

   ಸುತ್ತೂರು

 • 6. 
  ಕನ್ನಡಕಾಗಿ ದುಡಿದ ಈ ಜರ್ಮನ್ ವಿದ್ವಾಂಸರನ್ನು ಗುರುತಿಸಿ.
  • A. 

   ಸೂರ್ಯನಾಥ ಕಾಮತ್

  • B. 

   ಎ.ಎಸ್.ಮೂರ್ತಿ

  • C. 

   ಹರ್ಮನ್ ಮೋಗ್ಲಿಂಗ್

  • D. 

   ಫರ್ಡಿನೆಂಡ್ ಕಿಟಲ್

Back to Top Back to top