ಯಕ್ಷಪ್ರಶ್ನೆ ಸಂಪುಟ ೧ ಸಂಚಿಕೆ ೬

6 | Total Attempts: 353

SettingsSettingsSettings
Please wait...

ಯಕ್ಷಪ್ರಶ್ನೆ ಸಂಪುಟ ೧ ಸಂಚಿಕೆ ೬ ...ಸ್ವಾಗತ, ಸುಸ್ವಾಗತ, ಶುಭಸ್ವಾಗತ.ತಮ್ಮ ಹೆಸರು ಅಥವಾ ಮಿಂಚಂಚೆ ವಿಳಾಸವನ್ನು ಸರಿಯಾಗಿ ಬರೆದು ನಂತರ ಉತ್ತರಿಸಲು ಶುರುಮಾಡಿ. ಮುಂದೆ ಬಹುಮಾನ ಸಂಪಾದಿಸಲು ಅನುಕೂಲವಾಗಬಹುದು.!


Questions and Answers
 • 1. 
  ‘ಅಡೂಳಿ ಕೊಡು’ ಎಂಬ ನುಡಿಗಟ್ಟಿನ ಅರ್ಥವೇನು?
  • A. 

   ‘ಬಳುವಳಿ ಕೊಡು

  • B. 

   ಕಿರುಕುಳ ಕೊಡು

  • C. 

   ನೆರವನ್ನು ಕೊಡು

  • D. 

   ಅಗ್ಗವಾಗಿ ಮಾರು

 • 2. 
  ಈ ಕನ್ನಡ ಒಗಟನ್ನು ಬಿಡಿಸಿ. ಒಂದು ಅಂಕಣದಗಲ ಆಹರವ ತೋಡಿ ಚೆಂದವನ ಹಿಡಿ ತಂದು ಅದರೊಳಗೆ ಕೂಡಿ| ಚೆಂದದಿಂ ನಾರಿಯರ ಕೈಯೆರಡು ಜೋಡಿ ಒಂದಾಕಿ ಮೆಟ್ಟಿದರೆ ನೂರಾಯ್ತು ನೋಡಿ||
  • A. 

   ರಾಟೆ

  • B. 

   ಛತ್ರಿ

  • C. 

   ದಾಳಿಂಬೆ ಹಣ್ಣು

  • D. 

   ಶ್ಯಾವಿಗೆ ಒರಳು

 • 3. 
  ನಂ ಸುಪನಾತಿ ಸುಬ್ಬಿ ಎತ್ತುಗೋಳ ಮೇಲೆ ತೆಂಗಿನ್ ಕಾಯ್ ಆಕ್ಕಂಡ್ ಸಂತೇಗ್ ಒಂಟ್ಲು. ಮಾರ್ಕಂಡ್ ಬರಾಮ ಅಂತ! ಒಟ್ಟು ೩೨ ಎತ್ತುಗಳಿದ್ದವು. ಒಂದೊಂದ್ ಎತ್ತಿನ್ ಮ್ಯಾಗೆ ೩೨ ತೆಂಗಿನ್ ಕಾಯಿ ಒಟ್ಟಿದ್ಲು. ದಾರೀನಾಗೆ ೩೨ ಸುಂಕದ್ ಕಟ್ಟೆಗ್ಳು! ಒಂದೊಂದ್ ಸುಂಕದ್ ಕಟ್ಟೇನಲ್ಲೂವೆ, ಕಾಯಿ ಹೇರಿರೋ ಒಂದೊಂದ್ ಎತ್ತಿಗೂ ಒಂದೊಂದ್ ಕಾಯಂಗೆ ಸುಂಕ ಕಟ್ಟ್ ಬೇಕಿತ್ತು. ಅಂಗಿದ್ ಮ್ಯಾಕೆ ಸುಬ್ಬಿ ಒಟ್ಟು ಏಟು ಕಾಯ್ಗೋಳ್ನ ಸುಂಕಕ್ಕ್ ಕಟ್ಟಿದ್ಲು, ಏಟು ಕಾಯನ್ನ ಸಂತೇಗ್ ತಗೋಂಡ್ ಓಗಿ ಮಾರದ್ಲು...ಸುಬ್ಬಿ ಮನೇವ್ರು ಶ್ಯಾನೆ ಬಡವ್ರು ಸ್ವಾಮೇರಾ...ಒಸೀ ಜಾಸ್ತಿ ಕಾಯಿ ಬರಂಗೆ ಲೆಕ್ಕ ಮಾಡಿ ಕೊಡಿ ಮತ್ತೆ.... (ಆಯ್ಕೆಗಳಲ್ಲಿ ಮೊದಲು ಸುಂಕದ ಕಾಯ್ಗಳು, ಆಮ್ಯಾಕೆ ಮಾರಿದ್ ಕಾಯ್ಗಳವೆ)
  • A. 

   ೪೫೬-೪೫೩

  • B. 

   ೫೨೮-೪೩೮

  • C. 

   ೫೨೮-೪೯೬

  • D. 

   ೩೨೦-೪೫೬

 • 4. 
  ಉತ್ತರ ಪಿನಾಕಿನಿ ನದಿಯ ಮುಖ್ಯ ಉಪನದಿಗಳು ಯಾವವು?
  • A. 

   ಪಾಂಡರಿ, ತಟ್ಟಿಹಳ್ಳ ಮತ್ತು ಕಾನೇರಿ

  • B. 

   ನೆರಿಯ, ಶಿಶಿಲ ಮತ್ತು ಬೇಡ್ತಿ

  • C. 

   ಜಯಮಂಗಲಿ, ಚಿತ್ರಾವತಿ ಮತ್ತು ಪಾಪಾಘ್ನಿ

  • D. 

   ಪಯಸ್ವಿನಿ, ಬರಪೊಳೆ ಮತ್ತು ವಾಕಿ

 • 5. 
  ಈ ಅಭಯಾರಣ್ಯವನ್ನು ಗುರುತಿಸಿ.  ಸುಳುಹು ೧: ೧೦೦೦ ಮೀಟರ್ ಎತ್ತರದಲ್ಲಿರುವ, ೧೦೦ ಅಂಗುಲಕ್ಕಿಂತಲೂ ಹೆಚ್ಚು ಮಳೆ ಬೀಳುವ ಕರ್ನಾಟಕದ ಅಭಯಾರಣ್ಯ.  ಸುಳುಹು ೨: ೨೦೦ ವಿಧದ ಹೂವಿನ ಗಿಡಗಳು, ಆನೆ, ಹುಲಿ, ಚರತೆ, ಕಾಡುಕೋನ, ಚಿಗರೆ, ಕಾಡುಬೆಕ್ಕು, ಹಾರುವ ನರಿ  ಮುಂತಾದ   ಪ್ರಾಣಿಗಳಿರುವ ಕಾಡು. ಸುಳುಹು ೩: ೧೯೭೮ರ ಗಣತಿಯ ಪ್ರಕಾರ ಈ ಅಭಯಾರಣ್ಯದಲ್ಲಿ ೭೯ ಹುಲಿಗಳಿದ್ದವು.
  • A. 

   ಬಂಡೀಪುರ ಅಭಯಾರಣ್ಯ

  • B. 

   ನಾಗರಹೊಳೆ ಅಭಯಾರಣ್ಯ

  • C. 

   ಸೋಮೇಶ್ವರ ಅಭಯಾರಣ್ಯ

  • D. 

   ಜಾಗರಕೊಳ್ಳ ಅಭಯಾರಣ್ಯ

 • 6. 
  ಈ ಚಿತ್ರದಲ್ಲಿರುವ ಸಸ್ಯಶಾಸ್ತ್ರಜ್ಞ ಹಾಗೂ ಸಾಹಿತಿಯನ್ನು ಗುರುತಿಸಿ.
  • A. 

   ಡಾ.ಬಿ.ಪಿ.ರಾಧಾಕೃಷ್ಣ

  • B. 

   ಡಾ.ಬಿ.ಜಿ.ಎಲ್. ಸ್ವಾಮಿ

  • C. 

   ಡಾ. ಡಿ.ಎಸ್.ಶಿವಪ್ಪ

  • D. 

   ಡಾ.ಸತೀಶ್ ಸಿ ಮಾಹೇಶ್ವರಿ

Back to Top Back to top