ಯಕ್ಷಪ್ರಶ್ನೆ ಸಂಪುಟ ೧ ಸಂಚಿಕೆ ೫

6 | Total Attempts: 394

SettingsSettingsSettings
Please wait...

 ಯಕ್ಷಪ್ರಶ್ನೆ ಸಂಪುಟ ೧ ಸಂಚಿಕೆ ೪ ...ಸ್ವಾಗತ, ಸುಸ್ವಾಗತ, ಶುಭಸ್ವಾಗತ. ತಮ್ಮ ಹೆಸರು ಅಥವಾ ಮಿಂಚಂಚೆ ವಿಳಾಸವನ್ನು ಸರಿಯಾಗಿ ಬರೆದು ನಂತರ ಉತ್ತರಿಸಲು ಶುರುಮಾಡಿ. ಮುಂದೆ ಬಹುಮಾನ ಸಂಪಾದಿಸಲು ಅನುಕೂಲವಾಗಬಹುದು.!


Questions and Answers
 • 1. 
  ಅಜ್ಜಿಮಂಚ ತಲಕೆಳಗಾಗು’ ನುಡಿಗಟ್ಟಿನ ಅರ್ಥವೇನು?
  • A. 

   ಮಧ್ಯರಾತ್ರಿಯಾಗು

  • B. 

   ಬೆಳಗಿನ ಜಾವವಾಗು

  • C. 

   ಇಳಿಸಂಜೆಯಾಗು

  • D. 

   ಮೃತವಾಗು

 • 2. 
  ಈ ಕನ್ನಡ ಒಗಟನ್ನು ಬಿಡಿಸಿ  ಒಳಕೋಟೆ ಹೊರಕೋಟೆ ದುರ್ಗ ತಾನಲ್ಲ  ಒಳನಾರು ಹೊರನಾರು ತೆಂಗು ತಾನಲ್ಲ|  ಒಳಗೆ ಇರುವಾ ಹರಳು ಮಾಣಿಕ್ಯವಲ್ಲ  ಇದ ಹೇಳಬಲ್ಲ ಜಾಣರಿಗೆ ಅರಿದಲ್ಲ||'
  • A. 

   ಮಾವಿನ ಹಣ್ಣು

  • B. 

   ಬೇಲದ ಹಣ್ಣು

  • C. 

   ಹುಣಸೇಹಣ್ಣು

  • D. 

   ಹಲಸಿನಹಣ್ಣು

 • 3. 
  ಸುಪನಾತಿ ಸುಬ್ಬೀನ ಕಣಾ ಕಾಯಾಕೆ ಕಳಿಸಿದ್ಲು ನಮ್ಮವ್ವ. ಈ ಕಿತಾ ನಾಕಿ ಖಂಡುಗ ರಾಗಿ ಆಗಿತ್ತು. ಕಾಳನ್ನೆಲ್ಲ ಒಟ್ಟಿ ರಾಶಿ ಆಕಿದ್ರು. ಸುಬ್ಬಿ ಕಣ ಕಾಯೋದ್ ಬಿಟ್ಟು ಮಾವಿನ್ ಮರಕ್ಕೆ ಜೋಕಾಲಿ ಕಟ್ಕೊಂಡ್ ಪದಾ ಏಳ್ತಾ ಇದ್ಲು. ಆವಾಗ, ಆಕಾಸ್ದಾಗೆ ಸೂರ್ಯ ಪರಮಾತುಮ ಮರೆಯಾಗೋಷ್ಟು ಗಿಳಿಗೋಳು ಆರಿ ಬಂದ್ವು. ಕಾಳಿನ್ ರಾಶಿ ಮ್ಯಾಗೆ ಕೂತವು. ಕಾಳನ್ನು ಮುಕ್ಕೋಕೆ ಸುರು ಮಾಡಿದ್ವು. ಸುಪನಾತಿ ಸುಬ್ಬಿ ಈ ಕಡೆ ನೋಡ್ಲೆ ಇಲ್ಲ. ಅವಳ ಗಮ್ನ ಈ ಕಡೇಗ್ ಬರೋ ಒತ್ಗೆ ಕಾಳೆಲ್ಲ ಗಿಳಿಗಳ ಒಟ್ಟೇ ಸೇರಿದ್ವು. ಓಡಿ ಬಂದ್ಲು. ಎಲ್ಲಾ ಗಿಳಿಗಳು ಪುರ್ರಂತ ಆರಿ ಓದ್ವು. ಒಂದೇ ಒಂದು ಕುಂಟ ಗಿಳಿ ಮಾತ್ರ ಸುಬ್ಬೀ ಕೈಗೆ ಸಿಕ್ಕಾಕೊಂಡ್ ಬಿಡ್ತು. ಸುಬ್ಬಿ ತಗಂಡ್ ಕಚಕ್ ಅಂತ ಗಿಳಿ ಒಟ್ಟೇನ ಕೂದು ಬುಟ್ಲು. ಅವಳಿಗೆ ಒಂದು ಚಟಾಕು ಕಾಳು ಸಿಕ್ತು. ಅಂದ್ ಮ್ಯಾಕೆ ಕಣಕ್ಕೆ ಒಟ್ಟು ಏಟು ಗಿಳಿಗಳು ಬಂದಿದ್ವು ಅಂತ ಏಳ್ತೀರಾ? (ಸೂಚನೆ: ಗ್ರಾಮೀಣ ಪ್ರದೇಶದಲ್ಲಿ ಸೇರು-ಅಚ್ಚೇರು-ಪಾವು- ನೌಟಾಕು-ಚಟಾಕುಗಳು ಚಾಲ್ತಿಯಲ್ಲಿದ್ದ ಕಾಲದ ಲೆಕ್ಕವಿದು. ೪೦೦ ಸೇರಿಗೆ ಒಂದು ಖಂಡುಗ)
  • A. 

   ೨೫,೬೦೦ ಗಿಳಿಗಳು

  • B. 

   ೧೨,೬೫೦ ಗಿಳಿಗಳು

  • C. 

   ೨೮,೯೮೦ ಗಿಳಿಗಳು

  • D. 

   ೮೭,೫೬೦ ಗಿಳಿಗಳು

 • 4. 
  ಕರ್ನಾಟಕದ ಮೊದಲ ಕೋಟೆ ಯಾವುದು?
  • A. 

   ಚಿತ್ರದುರ್ಗದ ಕೋಟೆ

  • B. 

   ಬನವಾಸಿ ಕೋಟೆ

  • C. 

   ನಂದಿದುರ್ಗದ ಕೋಟೆ

  • D. 

   ಬಾದಾಮಿ ಕೋಟೆ

 • 5. 
  ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಪ್ರಖ್ಯಾತ ಧಾರ್ಮಿಕ ಸ್ಥಳ.  ಸುಳುಹು ೧: ಇದು ನಾಥ ಸಂಪ್ರದಾಯದ ಆದಿಮಠ. ಜೋಗಿಮಠವೆನ್ನುವ ಹೆಸರೂ ಇದೆ. ಸುಳುಹು ೨: ಭೈರವೇಶ್ವರ, ಸಿದ್ದೇಶ್ವರ, ಸೋಮೇಶ್ವರ ಗುಹಾಲಯಗಳಿವೆ. ಸುಳುಹು ೩: ಇಲ್ಲಿ ರಾಷ್ಟ್ರೀಯ ಮಯೂರ ಧಾಮವಿದೆ.
  • A. 

   ಮೇಲುಕೋಟೆ

  • B. 

   ಆದಿ ಚುಂಚನಗಿರಿ

  • C. 

   ಕಿಕ್ಕೇರಿ

  • D. 

   ಶ್ರೀರಂಗಪಟ್ಟಣ

 • 6. 
  ಈ ಚಿತ್ರದಲ್ಲಿರುವ ಜಗತ್ತಿನ ಎರಡನೆಯ ಅಂಧ ವೈದ್ಯರನ್ನು ಗುರುತಿಸಿ
  • A. 

   ಡಾ.ಜಿ.ಪರಮೇಷ್ವರ

  • B. 

   ಡಾ. ಕೆ. ಚಂದ್ರಶೇಖರ್

  • C. 

   ಡಾ.ವೈ.ಜಿ.ಪರಮೇಶ್ವರ

  • D. 

   ಡಾ. ರಾಜಶೇಖರ ಹುಣಸೂರು

Back to Top Back to top