ಯಕ್ಷಪ್ರಶ್ನೆ ಸಂಪುಟ ೧ ಸಂಚಿಕೆ ೪

6 | Total Attempts: 325

SettingsSettingsSettings
Please wait...

ಯಕ್ಷಪ್ರಶ್ನೆ ಸಂಪುಟ ೧ ಸಂಚಿಕೆ ೪ ...ಸ್ವಾಗತ, ಸುಸ್ವಾಗತ, ಶುಭಸ್ವಾಗತ. ತಮ್ಮ ಹೆಸರು ಅಥವಾ ಮಿಂಚಂಚೆ ವಿಳಾಸವನ್ನು ಸರಿಯಾಗಿ ಬರೆದು ನಂತರ ಉತ್ತರಿಸಲು ಶುರುಮಾಡಿ. ಮುಂದೆ ಬಹುಮಾನ ಸಂಪಾದಿಸಲು ಅನುಕೂಲವಾಗಬಹುದು.!


Questions and Answers
 • 1. 
  ‘ಅಗಳೊಂದ್ಕಡೆ ಗಂಜಿಯೊಂದ್ಕಡೆ ಆಗು’ ಎಂಬ ನುಡಿಗಟ್ಟಿನ ಅರ್ಥವೇನು?
  • A. 

   ಹೆರಿಗೆ ಸರಾಗವಾಗು ಆಗು

  • B. 

   ಅನ್ನ ಸರಿಯಾಗಿ ಆಗದಿರು

  • C. 

   ಗಂಡ ಹೆಂಡಿರಲ್ಲಿ ಜಗಳವಾಗು

  • D. 

   ಬಿನ್ನಾಭಿಪ್ರಾಯವನ್ನು ತೋರು

 • 2. 
  ಈ ಕನ್ನಡ ಒಗಟನ್ನು ಬಿಡಿಸಿ. ‘ಯಾವುದೀ ಪದವು? ಹೇಳು ರಮಣ ಬಿಡೆ ಮೊದಲಕ್ಷರ, ಕಡುಗಲಿಗಳ ಕಣ ಬಿಡೆ ಮಧ್ಯಾಕ್ಷರ ಅದುವೇ ಧನ ಬಿಡಲಂತ್ಯಾಕ್ಷರ ಮೃಡನೈತರುವನು ಬಿಡದಿರೆ ಅಕ್ಷರ ಪ್ರಾಣ ಕಣಾ’
  • A. 

   ಕರಣ

  • B. 

   ಚರಣ

  • C. 

   ಭರಣ

  • D. 

   ಹರಣ

 • 3. 
  ಸಿವಾರಾತ್ರಿ ಅಬ್ಬ ಬಂತು.ನಮ್ಮವ್ವ ಸುಪನಾತಿ ಸುಬ್ಬಿಯನ್ನು ಕರ್ದು ಯೋಳಿದ್ಲು. ಮಗಾ! ಗುಡೀಗ್ ಓಗಿ ಸಿವಂಗೆ ಊವಾ ಏರ್ಸಿ ಬಾರವ್ವ ಅಂದ್ಲು. ಸುಬ್ಬಿ ಬುಟ್ಟಿ ತುಂಬಾ ಊ ಮಡಿಕ್ಕಂಡು ಗುಡೀಗ್ ಒಂಟ್ಲು. ೧.ನಮ್ಮೂರ ಸಿವನ್ ಗುಡಿಗೆ ಆರು ಬಾಕ್ಲು. ಸುಬ್ಬಿ, ಬುಟ್ಟಿನಾಗ್ ತಂದಿದ್ದ ಊನಲ್ಲಿ ಅರ್ಧ ಊವನ್ನ ಮದಲ್ನೇ ಬಾಕ್ಲಾಗೆ ಇಟ್ಟು ಗಣಪ್ಪ, ನಮ್ಮನ್ನು ಕಾಪಾಡ್ ತಂದೆ ಅಂತ ಕೈ ಮುಗಿದ್ಲು. ೨.ಎರಡ್ನೆ ಬಾಕಲ್ತಾವ ಓದ್ಲು. ಬುಟ್ಟಿಯಾಗ್ ಉಳಿದಿದ್ ಊನಲ್ಲಿ ಆರ್ಧ ಊನ್ನ ಒಸಲ್ತಾವ ಇಟ್ಲು. ಯಪ್ಪ ಆರು ಮೊಗದೋನೆ ಅಡ್ಡಬಿದ್ದೆ ಅಂತ ಮೂರನೇ ಬಾಕಲ್ತಾವ ಓದ್ಲು. ೩.ಬುಟ್ಯಾಗಿದ್ದ ಊನಲ್ಲಿ ಅರ್ಧ ಒಸಲ್ ಮ್ಯಾಗಿಟ್ಟು ಯವ್ವ ನಮ್ಮವ್ವ ಕಾಳವ್ವ ಕಾಪಾಡವ್ವ ಎಂದು ಸರಣು ಹಾಕಿ ನಾಕ್ನೇ ಬಾಗಿಲ್ಗ್ ಓದ್ಲು. ೪.ನಾಕ್ನೆ ಬಾಗಲ್ನಾಗೆ ಬುಟ್ಯಾಗೆ ಉಳಿದಿದ್ದ ಊನಲ್ಲಿ ಸಮ ಅರ್ಧ ಮಾಡಿ ಬಸವಣ್ಣ ನಮ್ಮನ್ನು ಕಾಯಣ್ಣ ಅಂತ ಊನ್ನೆಲ್ಲ ಇಟ್ಲು. ೫.ಐದ್ನೇ ಬಾಗಲ್ನಾಗೆ ಬುಟ್ಟೀಲಿದ್ದ ಊನ್ನೆಲ್ಲ ಎರಡು ಭಾಗ ಮಾಡಿ ಒಂದು ಭಾಗಾನ್ನ ಅಲ್ಲೇ ಇಟ್ಟು ಸಿವಪ್ಪ ನಮ್ಮನ್ನು ಕಾಯಪ್ಪ ಅಂತ ಯೋಳಿ ಆರನೇ ಬಾಕ್ಲ್ ತಾವ ಓದ್ಲು. ೬.ಅಲ್ಲೂ ಬುಟ್ಟೀಲಿದ್ದ ಊನಲ್ಲಿ ಅರ್ಧ ಒಸಲಿಗಿಟ್ಟು ಸಿವನ್ ಮನದಾಗೆ ನೆನಸ್ಕಂಡ್ಲು. ೭.ಈಗ ಸುಬ್ಬಿಯ ಬುಟ್ಟೀಲಿ ಒಂದೇ ಒಂದು ಊವಾ ಉಳ್ಕಂಡಿತ್ತು. ಸಿವ, ನಮ್ಮೂರಿಗೆ ಒಳ್ಳೇದು ಮಾಡು ನನ್ ತಂದೆ ಅಂತ ಇದ್ದ ಒಂದು ಊವನ್ನ ಸಿವನ್ ತಲೆ ಮ್ಯಾಗಿಟ್ಟು, ಪೊಡಮಾಡಿ ಮನೀ ಕಡೆ ಒಂಟ್ಲು. ಕನ್ನಡಮ್ಮನ ಕಂದಮ್ಮ್ಗೋಳೆ...ಸುಪನಾತಿ ಸುಬ್ಬೀ ಬುಟ್ಟೀನಲ್ಲಿ ಏಟು ಊವನ್ನ ತಗೋಂಡ್ ಓಗಿದ್ಲು ಅಂತ ಯೋಳ್ತೀರಾ?
  • A. 

 • 4. 
  ಕರ್ನಾಟಕದಲ್ಲಿ ದೊರೆತಿರುವ ಅತ್ಯಂತ ಪ್ರಾಚೀನ ಶಿಲಾ ಶಾಸನವು ಯಾವುದು?
  • A. 

   ಅಶೋಕ ಶಾಸನ-ಬ್ರಹ್ಮಗಿರಿ

  • B. 

   ಹಲ್ಮಿಡಿ ಶಾಸನ-ಹಲ್ಮಿಡಿ

  • C. 

   ಚಂದ್ರವಳ್ಳಿ ಶಾಸನ-ಚಿತ್ರದುರ್ಗ

  • D. 

   ಕಪ್ಪೆ ಅರಭಟ್ಟನ ಶಾಸನ-ಬಾದಾಮಿ

 • 5. 
  ಈ ಸುಳುಹುಗಳ ಆಧಾರದ ಮೇಲೆ ಸರಿ ಉತ್ತರವನ್ನು ನೀಡಿ.೦೧. ತುಮಕೂರು ಜಿಲ್ಲೆಯಲ್ಲಿ ಸಿಗುವ ೧೩ನೆಯ ಶತಮಾನ ಕಾಲದ ‘ಮ್ಯೂಸಿಯಂ ಆಫ್ ಟೆಂಪಲ್ಸ್’ ಎಂಬ ಹೆಸರನ್ನು ಹೊತ್ತ ಪುಟ್ಟಾ ಹಳ್ಳಿ. ೦೨. ನೊಳಂಬರು ಕಲ್ಲೇಶ್ವರ ದೇವಾಲಯವನ್ನು ಇಟ್ಟಿದ್ದರೆ, ಹೊಯ್ಸಳರು ಚನ್ನಕೇಶವ ದೇವಾಲಯವನ್ನು ಕಟ್ತಿರುವರು. ೦೩. ಈ ದೇವಾಲಯ ಸಮುಚ್ಚಯವು ಕಿಬ್ಬನಳ್ಳಿ ಕ್ರಾಸಿನಿಂದ ೧೮ ಕಿ.ಮೀ. ಹಾಗೂ ಬಾಣಾಸಂದ್ರದಿಂದ ೭ ಕಿ.ಮೀ.ದೂರದಲ್ಲಿದೆ.
  • A. 

   ಸೀಬಿ

  • B. 

   ಬೆಳವಾಡಿ

  • C. 

   ಕೋರವಂಗಲ

  • D. 

   ಅರಳಗುಪ್ಪೆ

 • 6. 
  ಈ ಸಾಹಿತಿಯನ್ನು ಗುರುತಿಸಿ.
  • A. 

   ಗೊರೂರು ರಾಮಸ್ವಾಮಿ ಅಯ್ಯಂಗಾರ್

  • B. 

   ಪು.ತಿ.ನರಸಿಂಹಾಚಾರ್

  • C. 

   ಜಿ.ಪಿ.ರಾಜರತ್ನಂ

  • D. 

   ಕೆ.ವಿ.ಅಯ್ಯರ್

Back to Top Back to top